ಶನಿವಾರ, ನವೆಂಬರ್ 13, 2010

ನೆನಪುಗಳೇ ಹಾಗೆ



ನೆನಪುಗಳೇ ಹಾಗೆ,ನಗುವ ಮಗುವಿನ ಹಾಗೆ.
ನೆನಪುಗಳೇ ಹಾಗೆ,ತೀರ ಸೇರದ ಅಲೆಗಳ ಹಾಗೆ.
ಭಾವಗಳ ನಭ ಕಲಕಿ ನಿನ್ನ ಹೆಕ್ಕುವ ಹೊತ್ತು
ನೆನಪಾಯಿತೆನಗೆ ನಿನ್ನ ಪ್ರೀತಿಯ ತುತ್ತು.

ನೆನಪುಗಳೇ ಆಸರೆಯು ಬದುಕಲೀಗೆನಗೆ
ಭಾವಗಳೇ ತೋಳ್ಬವು ಈಜಲೆನಗೆ.
ನೀನಿಲ್ಲದಾ ಹಗಲು ಚಂದ್ರನಿಲ್ಲದ ರಾತ್ರಿಯಂತೆ.
ನೀನಿಲ್ಲದಾ ರಾತ್ರಿ ಸೊರ್ಯನಿರದ ಹಗಲಂತೆ.

ಅವನ ದೊರೆನು ನಾನು ನೀನಿಲ್ಲವೆಂದು
ನೀನಿರದ ಬದುಕೆಂದು ಅನಿಸಿಲ್ಲ ಎಂದೂ.
ನಿನ್ನಿರುವಿಕೆ ಬಲ್ಲೆ
ದುಃಖ ಮೀರಿದೆ ಎಲ್ಲೆ.

ಬೀಸುವ ಗಾಳಿಯಲ್ಲೂ ನಿನ್ನದೇ ನಿನಾದ
ಹರಿಯುವ ನೀರಲ್ಲೂ ನಿನ್ನದೇ ಉನ್ಮಾದ.
ಬದುಕ ಪ್ರೀತಿಸುತಿಹೆ ನಾನು
ಬದುಕು ಪೀಡಿಸಿದರೇನು?

ನಾನು ಬದುಕಿಹೆ, ನಿನ್ನ ನೆನಪುಗಳ ಜೊತೆಗೆ
ನೀನು  ಬದುಕಿಹೆ, ನನ್ನ ನೆನಪಾಗಿ, ಜೊತೆಗೆ.

ಒಲವ ದೀವಿಗೆ



ಜಗಕೆಲ್ಲ ಜ್ಯೋತಿರ್ಮಯಿ ಹಣತೆ ದೀಪ
ಪ್ರತೀ ಮನೆಗೂ ಪ್ರತೀ ಮನಕೂ ದಾರಿ ದೀಪ

ಒಲವಿಂದ ಬೆಳಕು
ಬೆಳಕಿಂದ ಬದುಕು
ಬದುಕ ಬೇಕಿದೆ ನಾನು
ಬೆಳಕ ನೀಡುವೆಯೇನು?
ಒಲವ ದೀವಿಗೆ ನೀನು
ಬೆಳಕ ಕಾದಿಹೆ ನಾನು

ಕತ್ತಲಾ ಗರ್ಭದೊಳು ಕುಡಿಯೊಡೆದ ಪ್ರೀತಿ
ಹೃದಯದಾ ದುರ್ಗದೊಳು ಮರಿಯೊಡೆದ ರೀತಿ
ಬೇಡುತಿದೆ ಮನವಿಂದು ಪ್ರೇಮದಾರೈಕೆ
ತೋರು ಬಾ ಏಲೆ ಬೆಳಕೆ ಯಾರು ಆಕೆ?
                                          

ಬುಧವಾರ, ನವೆಂಬರ್ 10, 2010

साथी

   
            बचपन मे खिलोने जवानी मे जोश
            और बुढापे मे इनसान को धन सात देता है !!
             
                  हिम्मत के हतियार अगर हात से खिसके तो
                  तन सात देता है मन सात देता है
                  तब सिर्फ़.........
                                             प्रभु का मनन् सात देता है !!
                                            

ಬರಬೇಕೀಗಷ್ಟೇ.......




ವಸುಂಧರೆ ಕೈತೊಳೆದು ಕಂಗೊಳಿಸುವಾ ಹೊತ್ತು,
ದೂರದಲಿ ಚಿಲಿಪಿಲಿ ಕಿವಿ ತಾಗುತ್ತಿತ್ತು.
ಮೆತ್ತನೆಯ ಹಾಸಿಗೆಗೆ ಬೀಳ್ಕೊಡುವಾ ಹೊತ್ತು,
ಕನಸುಗಳ ಕನವರಿಕೆ ಸುಳಿದಾಡುತಿತ್ತು.

ಯಾವುದೋ ಕರೆಯೊಂದು ಹೊರ ಸೆಳೆಯಿತು ನನ್ನ,
ರಂಗೋಲಿಯ ಮಧ್ಯದಲಿ ಆಗ ನೋಡಿದೆ ನಿನ್ನ.
ಭಾವಗಳ ಭೊರ್ಗರೆತ,
ಸೂಜಿಗಲ್ಲಿನ ಸೆಳೆತ.
ಹೃದಯವೇ ಜರ್ಝರಿತ,
ನೋವಾದರೂ ಹಿತ.
ಭೂರಮೆಯ ಸೌಂದರ್ಯವೆಲ್ಲ ಒಂದೆಡೆಗೆ,
ಕಲ್ಪನೆಯ ಸಾಕಾರ ರೂಪವಿನ್ನೊಂದೆಡೆಗೆ.

ಮಾಡಬೇಕೆಂದಿತು ಮನವು ಪ್ರೇಮ ನಿವೇದನೆ,
ಹೃದಯ ಚೀರಿತು ಒಲ್ಲೆಂದರೆ ವೇದನೆ.
ಅಂದಿಂದ ಬರೀ ಮೂಕ ಸಂವೇದನೆ,
ಕೇಳುವರಾರಿಲ್ಲ ಮೂಕ ಹಕ್ಕಿಯ ರೋದನೆ.
ಒಮ್ಮೆ ಹೇಳಬೇಕೆಂದಿರುವೆ ನನ್ನೆದೆಯ ಭಾವ,
ಹೇಳಲಾಗದೇ ಸುಡುತಿದೆ ನನ್ನೆದೆಯ ಜೀವ.
          
           ಕಾದಿರುವೆ ನಿನಗಾಗಿ,
           ನಿನ್ನ ಸನಿಹಕಾಗಿ.
                   ಬರಬೇಕೀಗಷ್ಟೇ.......
           ಮೌನ ಮಾತಾಗಿ ,
           ಮಾತು ಮುತ್ತಾಗಿ....!!


ಮಂಗಳವಾರ, ನವೆಂಬರ್ 9, 2010

ಮಿಡತೆ



ಕಣ್ಣಲ್ಲೇ ನುಡಿಯುತಿದೆ ಭವಿಷ್ಯವನಾ ಮಿಡತೆ.. !!
ಬತ್ತಿದಾ ಕಣ್ಣುಗಳಲಿ ಭಾವಕ್ಕೇನು ಕೊರತೆ ?
ಹಸಿವು ನೀರಡಿಕೆಯ ಮದ್ದೆ ಬದುಕನ್ನ ಕಟ್ಟಿರಲು..
ಕತ್ತಲಾ ಕೊಣೆಯಲಿ ಬೆಳಕನ್ನೇ ಕಂಡಿರಲು..
ಬದುಕಲಿನ್ನೇಕೆ ಭಯ?
ದೈವ ನೀಡಲು ಅಭಯ..!!

ಪ್ರೀತಿ ಮೊನಚು

ನಿನ್ನ ರೂಪ ಕಂಡವನು

ಕನಸಲ್ಲೂ ನೊಂದಿಹೆನು

ಕಲಕಿಹುದು ನಿನ್ನ ನೆನಪು ಮನದ ತಿಳಿಯ

ಬಿಡಿಸಿ ಹೋದೆಯಾ ಕೊನೆಗೂ ಪ್ರೇಮ ಸುಳಿಯ

          ಅವನ  ಕಾಡದೆ ನಿನ್ನ ಬಿಟ್ಟು ಕೊಟ್ಟೆನು ಎಂದು

          ಚುಚ್ಚುತಿದೆ ನನ್ನೊಳಗೆ ಪ್ರೀತಿ ಮೊನಚು!

          ಮನವು ಹೇಳಿದೆ ಅವಳು ತಿರುಗಿ ಬರುವಳು ಎಂದು

          ಜನವು ಹೇಳಿದೆ ಸುಳ್ಳು ಮೋಹ ಕಳಚು!

ಭಗವಂತನಾ ಭಾಷೆ ಪ್ರೇಮವೆಂಬುದು ತಾನೆ?

ಮತ್ತೇಕೆ ಹೀಗೆ ಕೊಟ್ಟವನೇ ಕಸಿಯುತಾನೆ?

ಎಂದು ಮುಕ್ತಿಯೊ ತಿಳಿಯೆ?

ಕಣ್ಮುಂದೆ ಬರೀ ಕಪ್ಪು.....

ಕೊನೆವರೆಗೊ ಕಾಡುವುದು

ಪ್ರೀತಿಗೆಲ್ಲಿದೆ ಮುಪ್ಪು.....?